ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ ಯು/ಎ ಸರ್ಟಿಫಿಕೇಟ್
Posted date: 13 Wed, Apr 2016 – 11:25:17 AM

ದ್ಯಾಮಮ್ಮ ದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಾಮದೇವ ಭಟ್ಟರ್ ನಿರ್ಮಿಸುತ್ತಿರುವ ಜೀವನದಲ್ಲಿ ಜಿಗುಪ್ಸೆಯಿಂದ ಅನಾಹುತಮಾಡಿಕೊಳ್ಳಲು ಹೊರಟ ಇಬ್ಬರು ಯುವಕರ ನಡುವಿನ ಹಾಸ್ಯ ಪ್ರಸಂಗಗಳನ್ನು ತೆರೆಯ ಮೇಲೆ ನಿರೂಪಿಸಿರುವ ಕಾಮಿಡಿ ಚಿತ್ರ  ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ವಿನೂತನ ಮನರಂಜಾನಾತ್ಮಕ ಚಿತ್ರವೆಂದು ಪ್ರಶಂಶಿಸಿ ಯಾವುದೇ ಕಟ್ಸ್ ನೀಡದೆ ಯು/ಎ ಸರ್ಟಿಫಿಕೇಟ್ ನೀಡಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
 ಎ.ವೇಣುಗೋಪಾಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತಾ, ಮನುಯ್ಯಪ್ಲರ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ತ್ರಿಭುವನ್ ನೃತ್ಯ ನಿರ್ದೇಶನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸ್ಟಂಟ್ ಸಿದ್ದು ಸಾಹಸ, ಶಿವು ಜಮಕಂಡಿ ಸಾಹಿತ್ಯ, ಶ್ರೀನಿವಾಸ್ ಕುಮಾರ್ ಸಹ ನಿರ್ದೇಶನವಿದೆ. ವಿಕ್ರಂಆರ್ಯ, ಚಿಕ್ಕಣ್ಣ, ನಿಖಿತಾ, ಅಮಾನ್‌ಗ್ರೇವಲ್, ಶೋಭರಾಜ್, ಬುಲೆಟ್ ಪ್ರಕಾಶ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಜಯಲಕ್ಷ್ಮಿ, ಮನಮೋಹನ್‌ರೈ, ಕಿಂಗ್ ಮೋಹನ್, ಮೂಗ್ ಸುರೇಶ್, ಬಸವರಾಜ್ ಚಿರಲಾಪುರ ಮುಂತಾದವರ ತಾರಬಳಗವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed